ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಕೊಟ್ಟಿಗೆಹಾರದ ಏಕಲವ್ಯಾ ಮಾದರಿ ವಸತಿ ಶಾಲೆಯಲ್ಲಿನ ವಿದ್ಯಾರ್ಥಿ ಗಳಿಗೆ ಅಲ್ಲಿನ ಸಿಬ್ಬಂದಿ ವರ್ಗ ಸಣ್ಣ ಕಾರಣ ಗಳಿಗೆ ಮನಸೊಇಚ್ಚೆ ತಳಿಸಿದ್ದು ಸುಮಾರು 6ಜನ ವಿದ್ಯಾರ್ಥಿಗಳು ಗಂಭೀರ ವಾಗಿ ಗಾಯಗೊಂಡಿದ್ದಾರ.
ಘಟನೆ ವಿವರ. ದಿನಾಂಕ 20-3-2026ರ ಶುಕ್ರವಾರ ಸಂಜೆ ವಿದ್ಯಾರ್ಥಿಗಳು ಓದುತಿರುವಾಗ ಕೆಲವು ವಿದ್ಯಾರ್ಥಿಗಳು ಕೊಠಡಿಯ ಲೈಟ್ ಗಳನ್ನು ಆಪ್ ಮಾಡಿದರು ಎಂಬ ವಿಚಾರಕ್ಕೆ ಕೆಲವು ವಿದ್ಯಾರ್ಥಿಗಳು ಅಲ್ಲಿನ ಪ್ರಾಂಶುಪಾಲರಿಗೆ ದೂರುನಿಡಿದ್ದು.ಇದರಿಂದ ಕೋಪಗೊಂಡ ಪ್ರಾಂಶುಪಾಲರು ಹಾಗು ಅಲ್ಲಿನ ಸಿಬ್ಬಂದಿ ವರ್ಗ 6ಜನ ಮಕ್ಕಳನ್ನು ಕೊಠಡಿಯೊಂದಕ್ಕೆ ಕೂಡಿಹಾಕಿ ಪೈಪ್ ತುOಡಿನಿOದ ಗಂಭೀರವಾಗಿ ತಳಿಸಿದ್ದು ವಿದ್ಯಾರ್ಥಿಗಳು ಗಂಭೀರ ವಾಗಿ ಗಾಯಗೊಂಡಿದ್ದಾರೆ. ವಿಚಾರ ತಿಳಿದ ಬಣಕಲ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಕೊಠಡಿಯಲ್ಲಿ ಕೂಡಿ ಹಾಕಿದ್ದ ವಿದ್ಯಾರ್ಥಿಗಳನ್ನು ವಿಚಾರಿಸಿ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ. ವಿಚಾರ ತಿಳಿದ ವಿದ್ಯಾರ್ಥಿಗಳ ಪೋಷಕರು ಸಾರ್ವಜನಿಕರು ಸ್ಥಳಕ್ಕೆ ದೌಡಾ ಯಿಸಿ ಪ್ರತಿಭಟನೆ ಮಾಡುವುದರ ಮೂಲಕ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಶಾಲೆಯ ಸಿಬ್ಬಂದಿ ವರ್ಗದವರನ್ನು ಅಮಾನತ್ತು ಪಡಿಸಬೇಕು ಇಲ್ಲದಿದ್ದರೆ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ವಿಚಾರ ತಿಳಿದ ಚಿಕಮಗಳೂರು ಉಪವಿಭಗಾಧಿಕಾರಿ ನಟೇಶ್ ಮೂಡಿಗೆರೆ ವೃತ್ತ ನೀರಿಕ್ಷಕರಾದ ರಾಜಶೇಖರ್ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣಧಿಕಾರಿ ಮಹಾಂತೇಶ ಭಜಂತ್ರಿ ಮೂಡಿಗೆರೆ ತಹಶೀಲ್ದಾರ್ ಅಶ್ವಿನಿ ಭೇಟಿನೀಡಿ ಪರಿಶೀಲಿಸಿದರು. ನಂತರ ಸ್ಥಳಕ್ಕೆ ಭೇಟಿನೀಡಿದ ರಾಜ್ಯ ಆಧಿವಾಸಿ ಮುಖಂಡರು ಹಾಗು ರಾಜ್ಯ ಲ್ಯಾOಪ್ಸ ಸಹಕಾರಿ ಮಹಾಮಂಡಲದ ಮಾಜಿ ಅಧ್ಯಕ್ಷರಾದ ಮುತ್ತಪ್ಪನವರು,ಹಾಗು ಜಿಲ್ಲಾ ಆಧಿವಾಸಿ ಮುಖಂಡರಾದ ವಿಜೇಂದ್ರ,ಹರೀಶ್ ಸಬ್ಬೆನಹಳ್ಳಿ ಇವರು ಭೇಟಿನೀಡಿ ಅಲ್ಲಿ ನಡೆದಂತಹ ವಿಚಾರದ ಬಗ್ಗೆ ಮಾಹಿತಿ ಪಡೆದು ಇದರಬಗ್ಗೆ ಸಮಗ್ರ ವಾದ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ಹಲ್ಲೆ ಮಾಡಿಧಂತ ಶಾಲೆಯ ಸಿಬ್ಬಂದಿಗಳನ್ನು ಕೂಡಲೇ ಅಮಾನತ್ತಿನಲ್ಲಿ ಇಡಬೇಕು ಹಾಗು ಗಾಯಗೊಂಡಿರುವ ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಜನಾಂಗದವರಗಿದ್ದು ಹಲ್ಲೆ ಮಾಡಿರುವ ಸಿಬ್ಬಂದಿಗಳ ಮೇಲೆ ಪರಿಶಿಷ್ಟ ಜಾತಿ ಪರಿಶಿಷ್ಟವರ್ಗದವರ ದೌರ್ಜನ್ಯದಡಿ ಕೇಸುದಾಖಲಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸ ಬೇಕು. ಹಾಗು ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಎಲ್ಲರೂ ಹೊರ ರಾಜ್ಯದವರಗಿದ್ದು ಇವರಿಗೆ ಕನ್ನಡ ಮಾತನಾಡಲು ಬರುವುದಿಲ್ಲ ಆದುದರಿಂದ ಇವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು ಹಾಗು ಸಾರ್ವಜನಿಕರೆಲ್ಲರೂ ಮನವಿ ಮಾಡಿದರು.



