ನನ್ನ ಎಲ್ಲಾ ಪ್ರೀಯ ಓದುಗರೆ, ಇಂದು ವಿಶ್ವ ಅರಣ್ಯ ದಿನ. ಈ ಭೂಮಿ ಯು ಅದೆಷ್ಟು ಬಿಲಿಯನ್ ಟ್ರಿಲಿಯನ್ ಕಾಲಗಳ ಹಿಂದೆ ನಿರ್ಮಾಣ ಆದವು ನಂತರ ನಿರಂತರವಾಗಿ ಉಲ್ಕೆಗಳು ಅಪ್ಪಳಿಸಿ ನಂತರ ಭೂಮಿಯು ತಣ್ಣಗೆ ಆಗಿ ಒಂದಷ್ಟು ಸಸ್ಯ ಸರಿಸೃಪ ಮತ್ತು ಪ್ರಾಣಿಗಳು ಅದರಲ್ಲೂ ಮನುಷ್ಯ ನ ಉಗಮವಾಯಿತು ಇದು ಎಲ್ಲರಿಗೂ ತಿಳಿದ ಸಂಗತಿ. ಯಾವ ಕಾಲ ಘಟ್ಟದಲ್ಲಿ ಮನವನ ಉಗಮವಾಯಿತು ಅಂದಿನಿಂದ ಪರಿಸರದಲ್ಲಿನ ಎಲ್ಲ ವಸ್ತುಗಳನ್ನು ಬಳಸತೊಡಗಿದನು.ಈಗ ನಾವು ಎಷ್ಟರ ಮಟ್ಟಿಗೆ ಬೆಳೆದೆವು ಎಂದರೆ ಉಳಿದ ಪ್ರಾಣಿ, ಪಕ್ಷಿ,ಮರ,ಗಿಡ, ಸಂಕುಲಕ್ಕೆ ಮುಳ್ಳಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು.ಇದಕ್ಕೆ ನಿಜವಾದ ಕಾರಣ ಮಾನವನ ಅತಿಆಸೆ ಇದರಿಂದ ತ್ರಿಕಾಲಗಳು ಬದಲಾಗಿದೆ ತುಂಬಾ ಹಿಂದೆ ನಮ್ಮ ಅಜ್ಜ ಅಜ್ಜಿ ಮಳೆಗಾಲ, ಬೇಸಿಗೆಕಾಲ,ಚಳಿಗಾಲವನ್ನು ನಿಖರವಾಗಿ ಯಾವ ತಿಂಗಳು ಆರಂಭ ಎಂದು ಹೇಳಬಲ್ಲವರಾಗಿದ್ದರು ಅಂದರೆ ಪರಿಸರ ಸಮತೋಲನ ಆ ದಿನಗಳಲ್ಲಿ ಹಾಗೆ ಇದ್ದವು.ಇಂದು ಅತಿಯಾದ ವಾಹನ ಸಂಖ್ಯೆ ದೊಡ್ಡ ದೊಡ್ಡ ಕಾರ್ಖಾನೆಗಳು ಬಿಡುವ ಇಂಗಾಲದ ಡೈಆಕ್ಸೈಡ್ ನಿಂದ ಉಸಿರಾಡುವ ಗಾಳಿ ಕಲುಷಿತ ಆಗಿವೆ. ಒಂದು ಕಡೆ ಮೈನಿಂಗ್ ಕಂಪನಿಗಳು, ರಸ್ತೆ ಅಗಲೀಕರಣ, ಅರಣ್ಯನಾಶ.ಅರಣ್ಯ ಒತ್ತುವರಿ ಹೀಗೆ ಮತ್ತಿತರ ಕಾರಣಗಳು ಇಂದು ಕುಡಿಯಲು ಯೋಗ್ಯವಲ್ಲದ ನೀರು ಇನ್ನಷ್ಟು ಜನ ಸಾಮಾನ್ಯರ ಆರೋಗ್ಯ ಅದಗೆಡುಸುತ್ತಿದೆ.ಅತಿಯಾದ ಕೇಮಿಕಲ್ ಬಳಕೆ ಆಹಾರ ಇನ್ನು ವಿಷವನ್ನಗಿಸಿದೆ 100 ವರ್ಷ ದ ಆಯಸ್ಸು ಈಗ 60 ದಾಟಿದರೆ ಸಾಕು ಎನ್ನುವ ಮಟ್ಟಿಗೆ ಬಂದಿದೆ ಎಂದರೆ ನೀವೆ ಯೋಚಿಸಿ.ಇನ್ನು ತಕ್ಕ ಮಟ್ಟಿಗೆ western ghats ಪಚ್ಚಿಮ ಘಟ್ಟದ ಮಲೆನಾಡಿನ ಪ್ರದೇಶದಲ್ಲಿ, ಅರಣ್ಯ ನಾಶವಾಗುತ್ತಿರುವುದು ಮಾನವ ಕೃತ್ಯಕ್ಕೆ ಸಾಕ್ಷಿಯಾಗಿ ನಿಂತಿದೆ. ಅತಿಯಾದ ಕಾಫಿತೋಟ ಭೂ ಕಬಳಿಕೆ ಒತ್ತುವರಿ ಇದರಿಂದ ಅಲ್ಲಿ ವಾಸಿಸುವ ಪ್ರಾಣಿ ಸಂಕುಲಗಳು ಬೇರೆ ಮಾರ್ಗ ವಿಲ್ಲದೆ ಮಾನವ ತನ್ನದು ಎಂದು ಹೇಳಿಕೊಳ್ಳುವ ತೋಟ ಗದ್ದೆ ವಾಸಸ್ಥಳಗಳಿಗೆ ಬರುತ್ತಿದೆ. ಈ ಪರಿಸರ ಸರಪಳಿಯನ್ನು ಮಾನವ ತನ್ನ ಅತಿ ಬುದ್ಧಿವಂತಿಕೆಯಿಂದ ಹೊಡೆಯುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಬರುತ್ತಿದೆ.
ಇದರಿಂದ ಕಾಡಿನಿಂದ ನಾಡಿಗೆ ಪ್ರಾಣಿಗಳು ಬರಲು ಆರಂಭಿಸಿದೆ ಇದುವೆ ಕಟು ಸತ್ಯ ಕುವೆಂಪು ಅವರು ನನ್ನ ಬಯಕೆ ಎಂಬುವುದರಲ್ಲಿ ಮಲೆನಾಡನ್ನು ಬಹಳ ಅಪ್ಪಿಕೊಂಡು ಈ ರೀತಿ ವರ್ಣಿಸುತ್ತಾರೆ
‘ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವುಕಲೆಯುತಲೆಯಲೆಯಾಗಿ ತೇಲಿ ಬರುತಿರಲಿಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬದನಿಯು ದನ ಕಾಯುವನ ಕೊಳಲೊಡನೆ ಬರಲಿಅಲ್ಲಿ ಸಿರಿಗನ್ನಡದ ಕಬ್ಬಗಳ ಹಬ್ಬಗಳುದಿನ ದಿನವು ಸವಿಯೂಟವಿಕ್ಕುತಿರಲೆನಗೆಬಾಂದಳದಿ ಹಾರಿದರು ಬುವಿಯಲ್ಲಿ ಜಾರುತಿಹರಸಿಕನಾಗಿಹನೊಬ್ಬ ಗೆಳೆಯನಿರಲೆನಗೆಬೈಗಾಗ ನಮ್ಮೊಡನೆ ಗಳಪಿಯಲೆದಡ್ಡಾಡೆಗೋಪಾಲನಾಗಿರುವ ತಿಮ್ಮನೆನಗಿರಲಿಮೇಲೆ ಬಾಳನು ಬಿಟ್ಟು ನಾನಳಿದು ಮರೆಯಾಗೆನನ್ನಾಸೆ ಏನೆಂದು ಎಲ್ಲರರಿತಿರಲಿಸಗ್ಗವಿವನೊಳಗೊಂಡಿರಲು ಸಗ್ಗವೆನಗಿರಲಿನರಕವಿವನೊಳಗೊಂಡಿರಲು ನರಕವಿರಲಿ.
ತಾನು ಅಳಿದರು ತನ್ನ ಆಸೆ ಏನೆಂದು ಎಲ್ಲರು ಅರಿಯಲಿ ಎಂದು ಅವರು ವರ್ಣಿಸುತ್ತಾರೆ ಆದರೆ ಈಗ ನಾವು ಮಲೆನಾಡಿನ ಪರಿಸರವನ್ನು ಎಷ್ಟುರ ಮಟ್ಟಿಗೆ ಕಾಪಾಡಿಕೊಂಡು ಬಂದಿದ್ದೆವೆ ಎಂದು ನಾವೆಲ್ಲರೂ ಒಮ್ಮೆ ಯೋಚಿಸಬೇಕು. ಇನ್ನು ಇತ್ತೀಚೆಗೆ ಮಾಧ್ಯಮಗಳಲ್ಲಿ ಆನೆ ತುಳಿತ ಪ್ರಕರಣಗಳು ಅತಿ ಹೆಚ್ಚು ಪ್ರಸರಣಾ ಆಗುತ್ತಿದೆ ಎಂದು ನಿಮಗೆ ಗೊತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸಾಕಾನೆಗಳನ್ನು ತಂದು ಆ ಕಾಡಾನೆಯನ್ನು ಹಿಡಿದು ಒಂದಷ್ಟು ದಿನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಆದರೆ ನಂತರ ಈ ಸನ್ನಿವೇಶ ಮರುಕಳಿಸುದಿಲ್ಲ ಎಂದು ನಂಬಲು ಆಗುವುದಿಲ್ಲ. ಸರಕಾರ ಈ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಿದರು ಕಳೆದು ಹೋದ ಜೀವ ಮರಳಿ ಬರುವುದೆ, ಇದಕ್ಕೆ ಮೂಲವಾಗಿ ಅರಣ್ಯ ನಾಶ ಮತ್ತು ಭೂ ಕಬಳಿಕೆ ಕಾರಣ ಪರೋಕ್ಷವಾಗಿ ಸರ್ಕಾರದ ಕೇವಲರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಮೆಲ್ನೋಟಕ್ಕೆ ಕಂಡು ಬರುತ್ತದೆ ಈ ಕೆಳಗಿನ ಅಂಕಿ ಅಂಶಗಳನ್ನು ಗಮನಿಸಿ.
ಅಂಶ. 2000.
ಕರ್ನಾಟಕ ಅರಣ್ಯ=38/39 ಸಾವಿರ ಚ.ಕಿ.ಮೀ.
ಮಲೆನಾಡ ಅರಣ್ಯ=24–27 ಸಾವಿರ ಚ.ಕಿ.ಮೀ
ನೈಸರ್ಗಿಕ ಕಾಡು ಗುಣಮಟ್ಟ =ಹೆಚ್ಚು
ನಷ್ಟ=ಕಡಿಮೆ
ಅಂಶ 2026
ಕರ್ನಾಟಕ ಅರಣ್ಯ= 40 ಸಾವಿರ ಚ.ಕಿ.ಮೀ
ಮಲೆನಾಡ ಅರಣ್ಯ=25–28 ಸಾವಿರ ಚ.ಕಿ.ಮೀ
ನೈಸರ್ಗಿಕ ಕಾಡು ಗುಣಮಟ್ಟ=ಕಡಿಮೆ (plantation ಹೆಚ್ಚು)
ನಷ್ಟ=ನಿರಂತರ ಕಡಿತ (mining, projects)
👉 ನೀವು ಗಮನಿಸಬೇಕಾದ ಪ್ರಮುಖ ವಿಷಯ:
ಒಟ್ಟು ಅರಣ್ಯ ಅಂಕಿಯಲ್ಲಿ ಸ್ವಲ್ಪ ಹೆಚ್ಚಾಗಿದೆ
ಆದರೆ ನಿಜವಾದ (dense natural forest)
👉 ಕಡಿಮೆಯಾಗುತ್ತಿದೆ
ಕಾರಣಗಳು:
ಮೈನಿಂಗ್ (mining 🪨)
ರಸ್ತೆ & ವಿದ್ಯುತ್ ಯೋಜನೆಗಳು
ಅರಣ್ಯ ಆಕ್ರಮಣ
ಕಾಫಿ coffee / arecanut plantations
ಇಲ್ಲಿ ನಿವು ಗಮನಿಸಿ ಅರಣ್ಯ ಇಲಾಖೆ ಕೇವಲ ಈ ವಾಣಿಜ್ಯ ಮರಗಳನ್ನು ಕಾಡಿನಲ್ಲಿ ಬೇಳೆಸುತ್ತಿದೆ ಇದರಿಂದ ಸರ್ಕಾರಕ್ಕೆ ಆದಾಯ ಹೊರತು ನೈಸರ್ಗಿಕ ಕಾಡು ಕಡಿಮೆ ಆಗುತ್ತಿದೆ ಅರಣ್ಯ ಇಲಾಖೆ ಇದರ ಬಗ್ಗೆ ಯು ಒತ್ತು ನೀಡಬೇಕು.
ನೈಸರ್ಗಿಕ ಕಾಡು ಮಳೆಯ ಮೂಲವಾಗಿದೆ ಅದು ಮೋಡಗಳ ತಡೆದು ಮಳೆ ಕಾರಣವಾಗುತ್ತದೆ.
ಈ ಎಲ್ಲ ಸಮಸ್ಯೆ ಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಆನೆ ದಾಳಿಯಿಂದ ನಿರಂತರವಾಗಿ ನೊಂದವರು ಸಾಮಾನ್ಯ ಜನರು ಇನ್ನು ಮುಂದಿನ ದಿನಗಳಲ್ಲಿ ಅರಣ್ಯ ನಾಶವಾದರೆ ಮಾನವ ಸಂಕುಲಕ್ಕೆ ಕುತ್ತಾಗಿ ಪರಿಣಮಿಸ ಬಹುದು. ಹಾಗಾಗಿ ಕಾಡನ್ನು ಬೆಳೆಸುವುದರ ಜೋತೆಗೆ ಉಳಿಸೋಣ ಆನೆ ಯ ನಿರಂತರ ದಾಳಿಯ ಶಾಶ್ವತ ಪರಿಹಾರ ಅದರ ವಾಸಸ್ಥಾನ ಅದಕ್ಕೆ ಬಿಟ್ಟುಕೊಡುವುದು, ಅದರ ತಂಟೆಗೆ ಹೋಗದೆ ಇರುವುದು,ಅರಣ್ಯವನ್ನು ಬೆಳೆಸುವುದು ಕಾಪಾಡುವುದು. ನಿಮಗೆ ಗೊತ್ತಿರಬಹುದು ನಮ್ಮ ಅಪ್ಪ ಅಮ್ಮ ನ ಕಾಲ ದಲ್ಲಿ ಕಾಡಾನೆ ದಾಳಿ ಎಲ್ಲಿಯೂ ಹೇಳಿಲ್ಲ ಎಂದು ಈಗಲೂ ಹೆಳುತ್ತಾರೆ.ಆದರೂ ಘಟಾನುಘಟಿ ಗಜ ನಿಗೆ ಎದುರುಂಟೆ ತಾನು ನಡೆದಿದ್ದೆ ದಾರಿ ಇದು ತಿಳಿದೆ ಹಿರಿಯರು ಒಂದು ಮಾತು ಹೇಳಿರಬಹುದು ಆನೆ ನಡೆದದ್ದೇ ದಾರಿ ಎಂದು.
ಬರಹ
ಕಾರ್ತಿಕ್ ಸೀನಾ
ತೋಳೂರು ಗುಡ್ಡ ಹಾಂದಿ ಚಿಕ್ಕಮಗಳೂರು ಜಿಲ್ಲೆ/ತಾಲ್ಲೂಕು


