ಹಸಿರ ನಂಟು
ವನದಾತೆ ಯೆ ಹಸಿರಾ ಸೀರೆ ಉಟ್ಟು ಮಲಗಿದಾಂಗ.
ನಮ್ಮ ಕ್ಯಾಮರದಾಗ ಅಡಗುಂಟೊ ಅಷ್ಟ ಅವಳ ಮೇಲಿನ ಪ್ರೇಮಾ
ನೋಡಿ ಜನರೇ ಅವಳ ಕಣ್ಣೀರು ಹರಿದಾತ ನದಿಹಾಂಗ ನೋಡಿಲ್ಲ, ಕೇಳಿಲ್ಲ ನಾವು ಅವಳ ಒಡಲಾ ನೋವ… ಒಡಲಾ ನೋವ…
ಗುಡ್ಡ ಕಡಿದಾತು ಕಟ್ಟಯ್ತು ಮನೆಯ..
ಮರದ ಬೇರಿಹದೆ ಮಣ್ಣು ಬದುಕುವುದಾದರು ಹೇಂಗ…. ತೆಗೆದ ಚಿತ್ರ ದ ಜಾಗ ಕಾಣಲಾರದೆ ಹೋದಿತೊ ಮುಂದೋದು ದಿನದಾಗ..
ಎಚ್ಚೆತ್ತು ಉಳಿಸು ಮಾನವ ಬೇಳೆಸೊ ವನವ
ನಗುವ ಮನ ವಿಲ್ಲ ಕಾಣಲು ಕಾನನ ವಿಲ್ಲ.
ಮರವಿಲ್ಲ ಮರದ ಮೇಲಿನ ಚಿಲಿ ಪಿಲಿಯು ಇಲ್ಲ. ಮುಂಜಾನೆ ಹಕ್ಕಿಯ ಸುಪ್ರಭಾತ ವಿಲ್ಲ .
ವನ ದೇವತೆ ಮುನಿದರೆ ನಾವಾರಿಲ್ಲ.
ಅಪ್ಪ ನೆಟ್ಟ ಆಲದ ಮರ ವಿರಲಿ.
ಕೋಗಿಲೆಯೊಂದು ಕೂತು ಅಲ್ಲಿ ಹಾಡುತಿರಲಿ.
ಸಾವಿರ ಜೀವಕ್ಕದು ಆಸರೆಯಾಗಿರಲಿ.
ಇದು ನಮ್ಮ ನಿಮ್ಮೆಲ್ಲರ ಆಶ್ರಯ ವಾಗಿರಲಿ.
ಕಾರ್ತಿಕ್ ಸೀನಾ….

ಬರಹ :ಕಾರ್ತಿಕ್ ಸೀನಾ, ತೋಳೂರು ಗುಡ್ಡ ಗ್ರಾಮ,  ಚಿಕ್ಕಮಗಳೂರು ತಾಲೂಕು.