ಮೂಡಿಗೆರೆ: ಶುಭನಗರ ಗ್ರಾಮದಲ್ಲಿ ಕಾಡಾನೆಗಳ ಸಂಚಾರ – ಸಾರ್ವಜನಿಕರಿಗೆ ಅರಣ್ಯ ಇಲಾಖೆಯ ಎಚ್ಚರಿಕೆ
ಮೂಡಿಗೆರೆ ಅರಣ್ಯ ಇಲಾಖೆಯ ಪ್ರಕಟಣೆಯ ಪ್ರಕಾರ, ಶುಭನಗರ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಸಂಚಾರ ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಶುಭನಗರ ಗ್ರಾಮದ ತೋಟಗಳಲ್ಲಿ ಯಾರೂ ಕೆಲಸಕ್ಕೆ ತೆರಳಬಾರದು ಹಾಗೂ ಅನಿವಾರ್ಯ ಕಾರಣವಿಲ್ಲದೆ ಮನೆಯಿಂದ ಹೊರಗೆ ಸಂಚರಿಸಬಾರದು ಎಂದು ಅರಣ್ಯ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.
ಅಲ್ಲದೆ ಮಣ್ಣಿಕೆರೆ, ಭದ್ರಾಪುರ ಎಸ್ಟೇಟ್, ಗಾಡಿಚೌಕ, ಮರೆಬೈಲು, ಚಂದ್ರಪುರ ಹಾಗೂ ಕೇಳಚಂದ್ರ ಕಮ್ಮರಗೋಡು ಎಸ್ಟೇಟ್ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು, ಕಾರ್ಮಿಕರು ಹಾಗೂ ವಾಹನ ಸವಾರರು ಹೆಚ್ಚಿನ ಎಚ್ಚರಿಕೆ ವಹಿಸಬೇಕು.
ಯಾವುದೇ ಸ್ಥಳದಲ್ಲಿ ಕಾಡಾನೆಗಳು ಕಂಡುಬಂದಲ್ಲಿ ತಕ್ಷಣವೇ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 7204004261 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ದಿನಾಂಕ: 05 ಆಗಸ್ಟ್ 2026
ಸಮಯ: ಮಧ್ಯಾಹ್ನ 3:10 ಗಂಟೆ
– ಅರಣ್ಯ ಇಲಾಖೆ, ಮೂಡಿಗೆರೆ.
ಮೂಡಿಗೆರೆ : ಕಾಡಾನೆಗಳು ಈಗ ಎಲ್ಲಿವೆ..?
GNE UPDATES
ಇತ್ತೀಚಿನ ಸುದ್ದಿ