ದಿನಾಂಕ: 07 ಆಗಸ್ಟ್ 2026
ಸಮಯ: ಬೆಳಿಗ್ಗೆ 08:25
ಚಂದ್ರಪುರದ ಎಸ್ಟೇಟ್ನಲ್ಲಿ ಮೂರು ಕಾಡಾನೆಗಳ ಸಂಚಾರ – ಸಾರ್ವಜನಿಕರಿಗೆ ಅರಣ್ಯ ಇಲಾಖೆಯ ಎಚ್ಚರಿಕೆ
ಮೂಡಿಗೆರೆ ಅರಣ್ಯ ಇಲಾಖೆಯ ಪ್ರಕಟಣೆಯ ಪ್ರಕಾರ, ಮೂರು ಕಾಡಾನೆಗಳು ಚಂದ್ರಪುರ ಗ್ರಾಮದ ಡಿ.ಎಂ. ಪುಟ್ಟೇಗೌಡ್ರು ಅವರ ಎಸ್ಟೇಟ್ನಲ್ಲಿ ಕಂಡುಬಂದಿವೆ.
ಈ ಹಿನ್ನೆಲೆಯಲ್ಲಿ ಗಾಡಿಚೌಕ, ಮರೆಬೈಲು, ಚಂದ್ರಪುರ, ಕೆಳಚಂದ್ರ ಹಾಗೂ ಕಮ್ಮರಗೋಡು ಎಸ್ಟೇಟ್ ಸುತ್ತಮುತ್ತಲಿನ ಗ್ರಾಮಸ್ಥರು, ತೋಟದ ಕಾರ್ಮಿಕರು ಹಾಗೂ ವಾಹನ ಸವಾರರು ಹೆಚ್ಚಿನ ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಅಗತ್ಯವಿಲ್ಲದೆ ಕಾಡಾನೆಗಳಿರುವ ಪ್ರದೇಶಗಳಿಗೆ ತೆರಳುವುದನ್ನು ತಪ್ಪಿಸಿ, ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.
ಯಾವುದೇ ಸ್ಥಳದಲ್ಲಿ ಕಾಡಾನೆಗಳು ಕಂಡುಬಂದಲ್ಲಿ ತಕ್ಷಣವೇ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 7204004261 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಕೋರಿದೆ.
– ಅರಣ್ಯ ಇಲಾಖೆ, ಮೂಡಿಗೆರೆ
ಮೂಡಿಗೆರೆ : ಕಾಡಾನೆಗಳು ಈಗ ಎಲ್ಲಿವೆ..?
GNE UPDATES
ಇತ್ತೀಚಿನ ಸುದ್ದಿ