ಮೂಡಿಗೆರೆ, ಆಗಸ್ಟ್ 08: ಮೂಡಿಗೆರೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಭುವನೇಶ್ವರಿ ಹಾಗೂ ಬೀಟಮ್ಮ-2 ಗುಂಪಿನ ಕಾಡಾನೆಗಳು ಕಾನಹಳ್ಳಿ ಕಾಡಿನಲ್ಲಿ ಕಂಡುಬಂದಿವೆ.
ಈ ಕಾಡಾನೆಗಳು ಜಿ. ಹೊಸಹಳ್ಳಿ ಟಾಟಾ ಕಾಫಿ ಎಸ್ಟೇಟ್, ಜಿ. ಹೊಸಹಳ್ಳಿ ಗ್ರಾಮ, ಪೋಡಿಯ ಕಾಲೋನಿ ಹಾಗೂ ಸಿಲ್ವರ್ ಖಾನ್ ಎಸ್ಟೇಟ್ ಸುತ್ತಮುತ್ತಲಿನ ಪ್ರದೇಶಗಳಿಗೆ ರಾತ್ರಿ ವೇಳೆಯಲ್ಲಿ ಸಂಚರಿಸುವ ಸಾಧ್ಯತೆ ಇರುವುದರಿಂದ, ಈ ಭಾಗದ ಗ್ರಾಮಸ್ಥರು ಹಾಗೂ ವಾಹನ ಸವಾರರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ರಾತ್ರಿ ಸಮಯದಲ್ಲಿ ಅನಗತ್ಯವಾಗಿ ಸಂಚರಿಸದಂತೆ ಹಾಗೂ ಕಾಡಾನೆಗಳು ಕಂಡುಬಂದಲ್ಲಿ ಅವುಗಳ ಸಮೀಪಕ್ಕೆ ತೆರಳದೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.
📞 ಕಾಡಾನೆ ಕಂಡುಬಂದಲ್ಲಿ ಮಾಹಿತಿ ನೀಡಿ
ಕಾಡಾನೆಗಳು ಕಂಡುಬಂದಲ್ಲಿ ತಕ್ಷಣ ಜಿಲ್ಲಾ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ತಿಳಿಸಿದೆ.
ದೂರವಾಣಿ ಸಂಖ್ಯೆ: 7204004261
ದಿನಾಂಕ: 08-08-2026
ಸಮಯ: ಸಂಜೆ 06:00 ಗಂಟೆ
— ಅರಣ್ಯ ಇಲಾಖೆ, ಮೂಡಿಗೆರೆ.
ಮೂಡಿಗೆರೆ ಯಲ್ಲಿ ಕಾಡಾನೆಗಳ ಸಂಚಾರ: ಗ್ರಾಮಸ್ಥರು, ವಾಹನ ಸವಾರರಿಗೆ ಎಚ್ಚರಿಕೆ!
GNE UPDATES
ಇತ್ತೀಚಿನ ಸುದ್ದಿ