ಮೂಡಿಗೆರೆ, ಆಗಸ್ಟ್ 13: ಮೂಡಿಗೆರೆ ಅರಣ್ಯ ಇಲಾಖೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಕಾಡಾನೆಗಳ ಸಂಚಾರ ಕಂಡುಬಂದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಜಾಗರಖಾನ್ ಪ್ರದೇಶದಲ್ಲಿ ಮೂರು ಕಾಡಾನೆಗಳು ಕಾಣಿಸಿಕೊಂಡಿದ್ದು, ಅವು ದುಂಡುಗ, ಹಳಸೆ, ಜಾಗರಖಾನ್, ಜಾಗರಮನೆ, ಮಣ್ಣಿಕೆರೆ, ಶುಭನಗರ ಹಾಗೂ ಚಂದ್ರಪುರ ಗ್ರಾಮಗಳ ಸುತ್ತಮುತ್ತ ಸಂಚರಿಸುವ ಸಾಧ್ಯತೆ ಇರುವುದರಿಂದ, ಈ ಭಾಗದ ಗ್ರಾಮಸ್ಥರು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಇಲಾಖೆ ಮನವಿ ಮಾಡಿದೆ.
ಇದೇ ವೇಳೆ ಸರ್ವೇ ನಂ. 73ರ ಉದ್ದಿ ಕುಂಬ್ರಿ ಕಾಡಿನಲ್ಲಿ ಒಂಟಿ ಕಾಡಾನೆಯೊಂದು ಕಾಣಿಸಿಕೊಂಡಿದ್ದು, ಅದು ಜಿ. ಹೊಸಹಳ್ಳಿ ಟಾಟಾ ಕಾಫಿ ಎಸ್ಟೇಟ್, ಜಿ. ಹೊಸಹಳ್ಳಿ ಗ್ರಾಮ, ಪೋಡಿಯ ಕಾಲೋನಿ ಹಾಗೂ ಹೊಸಪುರ ಗ್ರಾಮಗಳ ಸುತ್ತಮುತ್ತ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಮತ್ತು ವಾಹನ ಸವಾರರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.
ಕಾಡಾನೆಗಳು ಕಂಡುಬಂದಲ್ಲಿ ಸಾರ್ವಜನಿಕರು ಅವುಗಳ ಸಮೀಪ ತೆರಳದೆ, ಸುರಕ್ಷಿತ ಅಂತರ ಕಾಯ್ದುಕೊಂಡು ತಕ್ಷಣ ಜಿಲ್ಲಾ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ – 7204004261 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಅರಣ್ಯ ಇಲಾಖೆ, ಮೂಡಿಗೆರೆ
ದಿನಾಂಕ: 13-08-2026 | ಸಮಯ: ರಾತ್ರಿ 8.15ರಿಂದ 8.20ರವರೆಗೆ.
ಮೂಡಿಗೆರೆ : ವಿವಿಧ ಕಡೆಗಳಲ್ಲಿ ಕಾಡನೆಗಳ ಸಂಚಾರ..? ಎಚ್ಚರ ವಿರಲಿ..
GNE UPDATES
ಇತ್ತೀಚಿನ ಸುದ್ದಿ