ಮೂಡಿಗೆರೆ, ಆಗಸ್ಟ್ 14: ಮೂಡಿಗೆರೆ ಅರಣ್ಯ ಇಲಾಖೆ ಪ್ರಕಟಿಸಿರುವ ಮಾಹಿತಿಯಂತೆ, ಮೂರು ಕಾಡಾನೆಗಳು ಜಾಗರ್ ಖಾನ್ ಪ್ರದೇಶದಲ್ಲಿ ಕಂಡುಬಂದಿವೆ.
ಈ ಹಿನ್ನೆಲೆಯಲ್ಲಿ ದುಂಡುಗ, ಹಳಸೆ, ಜಾಗರ್ ಖಾನ್, ಜಾಗರಮನೆ, ಮಣ್ಣಿಕೆರೆ, ಶುಭನಗರ ಹಾಗೂ ಚಂದ್ರಪುರ ಗ್ರಾಮಗಳ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಅದೇ ರೀತಿ, ಈ ಭಾಗದಲ್ಲಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರು ಅತೀ ಜಾಗರೂಕತೆಯಿಂದಿದ್ದು, ಅರಣ್ಯ ಇಲಾಖೆಯಿಂದ ಮಾಹಿತಿ ಪಡೆದುಕೊಂಡು ಮಾತ್ರ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದೆ.
ಕಾಡಾನೆಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 7204004261 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ತಿಳಿಸಿದೆ.
ದಿನಾಂಕ: 14-08-2026 | ಸಮಯ: ಬೆಳಿಗ್ಗೆ 8:40.
ಮೂಡಿಗೆರೆ : ಅರಣ್ಯ ಇಲಾಖೆಯಿಂದ ತುರ್ತು ಎಚ್ಚರಿಕೆ!
GNE UPDATES
ಇತ್ತೀಚಿನ ಸುದ್ದಿ