ಮೂಡಿಗೆರೆ, ಆಗಸ್ಟ್ 27: ದೊರೆಹಾಂದಿ ಹಾಗೂ ನಂದೀಪುರ ಭಾಗದಲ್ಲಿ ಸಂಚರಿಸುತ್ತಿದ್ದ ಒಂಟಿ ಕಾಡಾನೆಯೊಂದು ಮೂಡಿಗೆರೆ–ಗೆಂಡೆಹಳ್ಳಿ ರಸ್ತೆಯನ್ನು ದಾಟಿ ಕಾರ್ ಬೈಲು ಭಾಗದಲ್ಲಿ ಸಂಚರಿಸುತ್ತಿರುವುದು ಕಂಡುಬಂದಿದೆ ಎಂದು ಅರಣ್ಯ ಇಲಾಖೆ ಮೂಡಿಗೆರೆ ತಿಳಿಸಿದೆ.

ಕಾಡಾನೆ ಸಂಚಾರದ ಹಿನ್ನೆಲೆಯಲ್ಲಿ ಕಾರ್ ಬೈಲು, ತುದಿಯಲ, ಗಬ್ಬಳ್ಳಿ, ಪುರ, ಚಟ್ಟನಹಳ್ಳಿ, ಹುಲಿಹಂಡ್ಲು ಎಸ್ಟೇಟ್ ಹಾಗೂ ಕಲ್ಲುಗುಡ್ಡ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ವಾಹನ ಸವಾರರು ರಾತ್ರಿ ವೇಳೆ ಹೆಚ್ಚಿನ ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

ಕಾಡಾನೆ ಕಂಡುಬಂದಲ್ಲಿ ಸಾರ್ವಜನಿಕರು ಆನೆಯ ಸಮೀಪಕ್ಕೆ ತೆರಳದೆ, ಅದರ ಚಲನವಲನಕ್ಕೆ ಅಡ್ಡಿಪಡಿಸದೆ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿಗೆ 7204004261 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ದಿನಾಂಕ: 27-08-2026
ಸಮಯ: ಸಂಜೆ 6:47.