ಗೌರಿ ನಿನಗೆ ಲಾಲ್ ಸಲಾಂ ಹೋರಾಟದ ಬದುಕಿಗೆ ಲಾಲ್ ಸಲಾಂ…
ನೀಲಿ ಮೇಘದಲ್ಲಿ ನಿತ್ಯ ಬೆಳಗುವ ನಕ್ಷತ್ರಗಳ ನಾಯಕಿಯಾಗಿ ನಾಡಿನ ನಾಡಿನ ನಾಲಿಗೆಯಲ್ಲಿ ಮಾತಾಗಿ ಮತ್ತೊಮ್ಮೆ ಬದುಕುವೆ…..
ರೈತ,ದಲಿತ, ಕಾರ್ಮಿಕರೆಂದರೆ ಕನವರಿಸುವಂತ ಕರುಳು ನಿನ್ನದು, ಹಸಿರು, ನೀಲಿ, ಕೆಂಬಾವುಟದೊಳಗೆ ಮರೆಯಲಾಗದ ನಿನ್ನ ನಡಿಗೆ…..
ಮಣ್ಣಲ್ಲಿ ಮೌಲ್ಯಗಳರಳಲಿ ಎಂದು ಅಪ್ಪನಂತೆ ನೀ ಪೆನ್ನನ್ನು ಹಿಡಿದೆ, ಗಡಗಡ ನಡುಗಿದ ಶಿಖಂಡಿಗಳೆಲ್ಲಾ ಒಂದಾಗಿ ನಿನ್ನ ಕೊಂದರಲ್ಲಾ ……
ಸತ್ಯಗಳೆಂದು ಸಾಯುವುದಿಲ್ಲ ಸಾವುಗಳಿಗೆ ಅವು ಹೆದರುವುದಿಲ್ಲ
ನಾಳೆಗಳೆಂದು ನಿಲ್ಲುವುದಿಲ್ಲ ಗೌರಿ ನಿನಗೆ ಸಾವೇ ಇಲ್ಲ…..
ಗೌರಿ ನಿನಗೆ ಲಾಲ್ ಸಲಾಂ..
ಹೋರಾಟದ ಬದುಕಿಗೆ ಲಾಲ್ ಸಲಾಂ….. ಹೊಂಚು ಹಾಕಿ, ಸಂಚುಹೂಡಿ ಶಿಖಂಡಿಗಳಂತೆ ಕೊಂದಿರಬಹುದು ಗೌರಿಯನ್ನು ಆದರೆ, ಕೊಲ್ಲಲು ಸಾಧ್ಯವಿಲ್ಲ ಗೌರಿಯ ವಿಚಾರಗಳನ್ನು…..
ಗೌರಿ ಅಮರ್ ಹೇ…….
ಗೌರಿ ಅಮರ್ ಹೇ………
🌹🌹🌹🌹🌹🌹🌹🌹
ಡಾ.ಹರೀಶ್ ನಲ್ಕೆ.
“ಗೌರಿ ನಿನಗೆ ಲಾಲ್ ಸಲಾಂ “
✊✊✊✊✊✊✊✊
✊✊✊✊✊✊✊✊
GNE UPDATES
ಇತ್ತೀಚಿನ ಸುದ್ದಿ