ಮೂಡಿಗೆರೆ, ಆಗಸ್ಟ್ 24: ಮೂಡಿಗೆರೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಕಾಡಾನೆಗಳ ಸಂಚಾರ ಕಂಡುಬಂದಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು, ಕಾರ್ಮಿಕರು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಕಾರ್ ಬೈಲು ಅವಿನಾಶ್ ಅವರ ತೋಟದಲ್ಲಿದ್ದ ಎರಡು ಕಾಡಾನೆಗಳು ಬೇವಿನಗುಡ್ಡೆ ತಮ್ಮಣ್ಣಗೌಡರ ತೋಟದ ಬಳಿ ಕಂಡುಬಂದಿವೆ. ಬೇವಿನಗುಡ್ಡೆ, ಗೌತಳ್ಳಿ, ಚಟ್ಟನಹಳ್ಳಿ, ಹುಲಿಹಂಡ್ಲು ಎಸ್ಟೇಟ್ ಹಾಗೂ ಕಲ್ಲುಗುಡ್ಡ ಸುತ್ತಮುತ್ತಲಿನ ಪ್ರದೇಶದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಇದೇ ವೇಳೆ ಒಂಟಿ ಕಾಡಾನೆಯೊಂದು ಹಾಸ್ಟೆಲ್ ಕಾಡು ತಿಮ್ಮಗೌಡರ ತೋಟ, ರವಿಕಿರಣ್ ಅವರ ತೋಟ ಹಾಗೂ ಪ್ರಕಾಶ್ ಗೌಡರ ತೋಟದ ಭಾಗದಲ್ಲಿ ಸಂಚರಿಸುತ್ತಿರುವುದು ಕಂಡುಬಂದಿದೆ. ಚಟ್ಟನಹಳ್ಳಿ, ಹುಲಿಹಂಡ್ಲು ಎಸ್ಟೇಟ್, ಕಲ್ಲುಗುಡ್ಡ ಹಾಗೂ ಕಸ್ಕೆಬೈಲ್ ಸುತ್ತಮುತ್ತಲಿನ ಗ್ರಾಮಸ್ಥರು, ಕಾರ್ಮಿಕರು ಮತ್ತು ವಾಹನ ಸವಾರರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ತಿಳಿಸಿದೆ.
ಕಾಡಾನೆಗಳು ಕಂಡುಬಂದಲ್ಲಿ ಅವುಗಳ ಬಳಿ ಹೋಗದೆ, ಅವುಗಳನ್ನು ಪ್ರಚೋದಿಸದೆ, ತಕ್ಷಣ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 7204004261ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಇಲಾಖೆ ಮನವಿ ಮಾಡಿದೆ.
ದಿನಾಂಕ: 24-08-2026
ಸಮಯ: ಬೆಳಿಗ್ಗೆ 8:18 ಮತ್ತು 8:25.
ಮೂಡಿಗೆರೆ: ಎರಡು ಕಾಡಾನೆಗಳು ಹಾಗೂ ಒಂಟಿ ಕಾಡಾನೆ ಸಂಚಾರ — ಅರಣ್ಯ ಇಲಾಖೆ ಎಚ್ಚರಿಕೆ
GNE UPDATES
ಇತ್ತೀಚಿನ ಸುದ್ದಿ