ಮೂಡಿಗೆರೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಭುವನೇಶ್ವರಿ ಗುಂಪಿನ ಕಾಡಾನೆಗಳು ದೊಡ್ಡಗಳ್ಳ ಎಸ್ಟೇಟ್‌ನಲ್ಲಿ ಕಂಡುಬಂದಿರುವುದು ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ಕಸ್ಕೆಬೈಲ್, ಕಲ್ಲುಗುಡ್ಡ, ಹೊಸಪುರ, ಆನೆ ಮಲ್ಲಪ್ಪ ಗುಡ್ಡ ಹಾಗೂ ಹುಲಿಹಂಡ್ಲು ಎಸ್ಟೇಟ್ ಸುತ್ತಮುತ್ತಲಿನ ಗ್ರಾಮಸ್ಥರು, ಕಾರ್ಮಿಕರು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

ಕಾಡಾನೆಗಳು ಕಂಡುಬಂದಲ್ಲಿ ಸಾರ್ವಜನಿಕರು ಅವುಗಳ ಸಮೀಪಕ್ಕೆ ತೆರಳದೆ, ತಕ್ಷಣ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ – 7204004261 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

ದಿನಾಂಕ: 25.08.2026
ಸಮಯ: ಬೆಳಿಗ್ಗೆ 08:40.