ಮೂಡಿಗೆರೆ, ಸೆಪ್ಟೆಂಬರ್ 1: ಕಸ್ಕೆಬೈಲ್ ಗ್ರಾಮದ ಶಶಿಧರ ಗೌಡ ಅವರ ತೋಟದಲ್ಲಿ ಒಂಟಿ ಕಾಡಾನೆಯೊಂದು ಕಂಡುಬಂದಿದ್ದು, ನಂತರ ಪ್ರಕಾಶ್ ಗೌಡ ಅವರ ತೋಟ, ರವಿ ಕಿರಣ್ ಅವರ ತೋಟ ಹಾಗೂ ಕಲ್ಲುಗುಡ್ಡ ಭಾಗದಲ್ಲಿಯೂ ಕಾಡಾನೆ ಸಂಚರಿಸುತ್ತಿರುವುದು ಕಂಡುಬಂದಿದೆ ಎಂದು ಅರಣ್ಯ ಇಲಾಖೆ ಮೂಡಿಗೆರೆ ಪ್ರಕಟಣೆಯಲ್ಲಿ ತಿಳಿಸಿದೆ.

ಕಸ್ಕೆಬೈಲ್, ಕಲ್ಲುಗುಡ್ಡ, ಚಟ್ಟನಹಳ್ಳಿ ಹಾಗೂ ಹುಲಿಹಂಡ್ಲು ಎಸ್ಟೇಟ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು, ಕಾರ್ಮಿಕರು ಹಾಗೂ ವಾಹನ ಸವಾರರು ರಾತ್ರಿ ವೇಳೆ ಅತ್ಯಂತ ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

ಕಾಡಾನೆ ಕಂಡುಬಂದಲ್ಲಿ ಅದರ ಸಮೀಪ ಹೋಗದೆ, ಯಾವುದೇ ರೀತಿಯಲ್ಲಿ ಪ್ರಚೋದಿಸದೆ, ತಕ್ಷಣವೇ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ:
📞 7204004261

ದಿನಾಂಕ: 01-09-2026
ಸಮಯ: ಬೆಳಗ್ಗೆ 07:45.