ಮೂಡಿಗೆರೆ: 23  ಶ್ರೀ ಸಿದ್ಧಾರ್ಥ್ ಹೆಗಡೆಯವರ ಹುಟ್ಟುಹಬ್ಬದ ಸವಿನೆನಪಿನಲ್ಲಿ ಸಾರ್ವಜನಿಕ ಸೇವೆಯ ಅಂಗವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.

“ರಕ್ತದಾನ ಮಹಾದಾನ – ಜೀವ ರಕ್ಷಣೆಗೆ ನಿಮ್ಮದೊಂದು ಹೆಜ್ಜೆ” ಎಂಬ ಸಂದೇಶದೊಂದಿಗೆ ನಡೆಯಲಿರುವ ಈ ರಕ್ತದಾನ ಶಿಬಿರವು ಆಗಸ್ಟ್ 23, 2026ರ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಬಿಳಗುಳದ ಸಿದ್ಧಾರ್ಥ ವನದಲ್ಲಿ ನಡೆಯಲಿದೆ.

ಈ ಸತ್ಕಾರ್ಯವನ್ನು ಸಿದ್ಧಾರ್ಥ್ ಹೆಗಡೆಯವರ ಅಭಿಮಾನಿಗಳ ಬಳಗ, ಮೂಡಿಗೆರೆ ತಾಲೂಕು ಕೆಂಪೇಗೌಡ ಒಕ್ಕಲಿಗರ ಸಂಘ ಹಾಗೂ ಪೀಸ್ & ಅವೇರ್ನೆಸ್ ಟ್ರಸ್ಟ್ (ರಿ.) – “ಇದು ಜನ ಸಾಮಾನ್ಯರ ಧ್ವನಿ” ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ.

ಸಾರ್ವಜನಿಕರು ಹಾಗೂ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಮಹತ್ಕಾರ್ಯದಲ್ಲಿ ಕೈಜೋಡಿಸಿ, ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.