ಚಿಕ್ಕಮಗಳೂರು : ಬಿ ಎಸ್ ಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಸಮಿತಿ ವತಿಯಿಂದ ಮಹಾತ್ಮಾ ಪ್ರೊ.ಬಿ.ಕೃಷ್ಣಪ್ಪ ಜೀ. ರವರ ಜನ್ಮದಿನಾಚರಣೆ ಆಚರಿಸಲಾಯಿತು ಅಧ್ಯಕ್ಷತೆಯನ್ನುಜಿಲ್ಲಾ ಅಧ್ಯಕ್ಷ ರಾದ ಪಿ.ಪರಮೇಶ್ವರ್ ರವರು ವಹಿಸಿದ್ದರು.


ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆಯನ್ನು ರಾಜ್ಯ ಉಪಾಧ್ಯಕ್ಷರಾದ ಜಾಕಿರ್ ಹುಸೇನ್,ರವರು ನೇರವೇರಿಸಿದರು ಪ್ರೊ ಬಿ ಕೃಷ್ಣಪ್ಪ ಜೀ ರವರ ಬಾವ ಚಿತ್ರಕ್ಕೆ ಪುಷ್ಪರ್ಚನೆಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕೆ.ಟಿ.ರಾಧಾಕೃಷ್ಣ ರವರು ಮತ್ತು ರಾಜ್ಯ ಕಾರ್ಯದರ್ಶಿಗಳಾದ ಕೆ.ಬಿ.ಸುಧಾ, ಜಾಕಿರ್ ಅಲಿಕಾನ್.ಎಲ್ಲ ಜಿಲ್ಲಾ ನಾಯಕರು ನೆರವೇರಿಸಿದರು,ಉದ್ಘಾಟಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಜಾಕಿರ್ ಹುಸೇನ್ ರವರು ಪ್ರೊ ಬಿ ಕೆ ರವರು ಎಲ್ಲ ಶೋಷಿತರ ಮನೆ ಮನೆಗೆ ಹೋರಾಟದ ಹಣತೆ ಹಚ್ಚಿದರು ಕರ್ನಾಟಕದಲ್ಲಿ ಬಹುಜನ ಚಳುವಳಿ ಬೆಳೆಯಲು ಭದ್ರ ಬುನಾದಿಯೊಂದಿಗೆ ಗ್ರಾಮ ಪಂಚಾಯತಿ ತಾಲೋಕು ಪಂಚಾಯ್ತಿ ಜಿಲ್ಲಾ ಪಂಚಾಯ್ತಿ ಸದಸ್ಯರು ಹಾಗಲಿಕೆ ಸಾಧ್ಯ ವಾಹಿತು,
ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ರವರು ಮಾತನಾಡುತ್ತಾ ಪ್ರೊ ಬಿ ಕೆ ರವರ ಪ್ರಾಮಾಣಿಕ ಹೋರಾಟದಿಂದ ಶೋಷಿತ ವರ್ಗಗಳಿಗೆ ರಾಜಕೀಯವಾಗಿ ಬೆಳೆಯಲು ನಾಂದಿಯಾಯಿತು ಅವರ ಆದರ್ಶ್ ತ್ಯಾಗ ಮುಂದಿನ ಪೀಳಿಗೆಗೆ ದಾರಿ ದೀಪಾವಾಯಿತು ಎಂದರು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕೆ ಟಿ ರಾಧಾಕೃಷ್ಣರವರು ಮಾತನಾಡುತ್ತಾ
ಪ್ರೊ. ಬಿ. ಕೆ ರವರು ಶೋಷಿತಸಮಾಜದೊಳಗೆ ಸ್ವಾಭಿಮಾನ ಬಿತ್ತಿ,ದ್ವನಿ ಇಲ್ಲದವರರಿಗೆ ದ್ವನಿ ಯಾದರು ಅವರ ಹೋರಾಟದಲ್ಲಿ ಚಂದ್ರಗುತ್ತಿಯಲ್ಲಿನ ಬೆತ್ತಲೆಸೇವೆಯಂಥ ಕ್ರೂರ ಪದ್ದತಿಯನ್ನ ನಿಲ್ಲಿಸಿದ್ದು
ಪ್ರೊ. ಬಿ. ಕೆ ರವರ ಹೋರಾಟದಲ್ಲಿ ದೊಡ್ಡ ಮೈಲಿಗಲ್ಲು  ಮತ್ತು ಶೋಷಿತ ಜಾತಿಗೆ ಸೇರಿದ (ಕುಂಬಾರ )ಸಮಾಜದ ಅನುಸೂಯಮ್ಮಅತ್ಯಾಚಾರ ವನ್ನುಖಂಡಿಸಿ ಹೋರಾಟವನ್ನು ಮಾಡಿ ಇತರೆ ಹಿಂದುಳಿದಶೋಷಿತರ ಪರವಾಗಿ ಹೋರಾಟ ಮಾಡುವುದರ ಮುಕಾಂತರ   ಚಳುವಳಿಯನ್ನು ವಿಸ್ತರಿಸಿದರು ಅವರ ಪ್ರೇರಣೆಯಿಂದ ಕರ್ನಾಟಕದಲ್ಲಿ ಬಿ ಎಸ್ ಪಿ ಬೆಳೆಸಲು ನಾಂದಿಯಾಯಿತು ಎಂದು ಸ್ಮರಿಸಿದರು.

ಪಿ.ಪರಮೇಶ್ವರ್ ರವರು ಪ್ರೊ.ಬಿ.ಕೆ.ರವರುಎಲ್ಲ ಶೋಷಿತ ಸಮುದಾಯಕ್ಕೆಒಳ್ಳೆ ಸಂದೇಶವನ್ನು ಕೊಟ್ಟಿದ್ದು ನಮ್ಮ ಪಕ್ಷ ಬಿ ಎಸ್ ಪಿ ನಮ್ಮ ವಾದ ಅಂಬೇಡ್ಕರ್ ವಾದ ನಮ್ಮ ನಾಯಕ ಕಾನ್ಷಿರಾಂ ಎಂದು ಹಳ್ಳಿ ಹಳ್ಳಿಗೂ ವಿಷಯವನ್ನುತಲುಪಿಸುವ ಮುಕಾಂತರ ಶೋಷಿತ ಸಮಾಜದೊಳಗೆ ರಾಜಕೀಯ ಆಸಕ್ತಿ ತುಂಬಿ ರಾಜಕೀಯ ಜಾಗೃತಿ ಮೂಡಿಸುವುದರ ಮುಕಾಂತರ  ಬಹುಜನ ಚಳುವಳಿಯನ್ನಾಗಿ ರಾಜಕೀಯ ಅದಿಕಾರದ ಕಡೆಗೆ ಮುನ್ನುಗ್ಗುಲು ಪ್ರೇರಣೆ ಯಾದರು ಎಂದು ನುಡಿದರು.

ಈ ಸಭೆಯಲ್ಲಿ ಸಭೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಸ್ತುವಾರಿಗಳಾದ ಕೆ.ಆರ್.ಗಂಗಾಧರ್, ಬಿ.ಎಂ.ಶಂಕರ್.ಜಿಲ್ಲಾ ಸಂಯೋಜಕರಾದ ಯು.ಬಿ.ಮಂಜಯ್ಯ.ಜಿಲ್ಲಾ ಉಪಾಧ್ಯಕ್ಷ  ಎಂ.ಬಾಬು, ಬಿ.ಏನ್. ಆನಂದ ಕೊಪ್ಪ,.ಪ್ರದಾನ ಕಾರ್ಯದರ್ಶಿ ಪಿ ಕೆ ಮಂಜುನಾಥ್.ಖಜಾಂಚಿ ವಾಹಿದ್ ಜಾನ್, ಜಿಲ್ಲಾ ಕಾರ್ಯದರ್ಶಿ ಬಕ್ಕಿ ಮಂಜುನಾಥ, ಕಿರಣ್ ಕೊಪ್ಪ.ಮೂಡಿಗೆರೆ ಅಧ್ಯಕ್ಷರಾದ ಲೋಕವಳ್ಳಿ ರಮೇಶ್, ತರೀಕೆರೆ ಆನಂದ, ಶೃಂಗೇರಿ ಶೀಲಾ ಸುಕೇಶ್,ಪ್ರದಾನ ಕಾರ್ಯದರ್ಶಿಯಾದ ಮಹೇಶ್ ಯು.ಎಂ. ಮೂಡಿಗೆರೆ.
ಶೃಂಗೇರಿಯ ಮಹೇಶ್,ಶೇಖರ್,ಸುರೇಶ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಖಜಾಂಚಿ ರತ್ನ, ಅಲ್ದುರ್ ಬ್ಲಾಕ್ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಇನ್ನು ಮುಂತಾದವರು ಸಭೆಯಲ್ಲಿಉಪಸ್ಥಿತರಿದ್ದರು.

ವರದಿ :
ಪಿ.ಕೆ.ಮಂಜುನಾಥ
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಗಳೂರು