ಮೂಡಿಗೆರೆ: 23 ಶ್ರೀ ಸಿದ್ಧಾರ್ಥ್ ಹೆಗಡೆಯವರ ಹುಟ್ಟುಹಬ್ಬದ ಸವಿನೆನಪಿನಲ್ಲಿ ಸಾರ್ವಜನಿಕ ಸೇವೆಯ ಅಂಗವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.
“ರಕ್ತದಾನ ಮಹಾದಾನ – ಜೀವ ರಕ್ಷಣೆಗೆ ನಿಮ್ಮದೊಂದು ಹೆಜ್ಜೆ” ಎಂಬ ಸಂದೇಶದೊಂದಿಗೆ ನಡೆಯಲಿರುವ ಈ ರಕ್ತದಾನ ಶಿಬಿರವು ಆಗಸ್ಟ್ 23, 2026ರ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಬಿಳಗುಳದ ಸಿದ್ಧಾರ್ಥ ವನದಲ್ಲಿ ನಡೆಯಲಿದೆ.
ಈ ಸತ್ಕಾರ್ಯವನ್ನು ಸಿದ್ಧಾರ್ಥ್ ಹೆಗಡೆಯವರ ಅಭಿಮಾನಿಗಳ ಬಳಗ, ಮೂಡಿಗೆರೆ ತಾಲೂಕು ಕೆಂಪೇಗೌಡ ಒಕ್ಕಲಿಗರ ಸಂಘ ಹಾಗೂ ಪೀಸ್ & ಅವೇರ್ನೆಸ್ ಟ್ರಸ್ಟ್ (ರಿ.) – “ಇದು ಜನ ಸಾಮಾನ್ಯರ ಧ್ವನಿ” ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ.
ಸಾರ್ವಜನಿಕರು ಹಾಗೂ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಮಹತ್ಕಾರ್ಯದಲ್ಲಿ ಕೈಜೋಡಿಸಿ, ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
ರಕ್ತದಾನ ಶಿಬಿರಕ್ಕೆ ಸಾರ್ವಜನಿಕರಿಗೆ ಆಹ್ವಾನ
GNE UPDATES
ಇತ್ತೀಚಿನ ಸುದ್ದಿ