ಮೂಡಿಗೆರೆ, ಆ.30: ಮೂಡಿಗೆರೆ ಅರಣ್ಯ ಇಲಾಖೆಯ ಪ್ರಕಟಣೆಯ ಪ್ರಕಾರ, ಭುವನೇಶ್ವರಿ ಗುಂಪಿನ ಕಾಡಾನೆಗಳು ಜಿ. ಹೊಸಹಳ್ಳಿ ಗ್ರಾಮದ ಮಾಸ್ಟರ್ ಲೋಕೇಶ್ ಅವರ ಮನೆಯ ಸಮೀಪ ಹಾಗೂ ಲಲಿತಾ ರಾಜು ಅವರ ತೋಟದ ಭಾಗದಲ್ಲಿ ಕಂಡುಬಂದಿವೆ.
ಈ ಹಿನ್ನೆಲೆಯಲ್ಲಿ ಬೆಳಗ್ಗಿನ ಜಾವ ಸಾರ್ವಜನಿಕರು ಅನಾವಶ್ಯಕವಾಗಿ ಸಂಚರಿಸದಂತೆ ಅರಣ್ಯ ಇಲಾಖೆ ಸೂಚಿಸಿದೆ. ಜಿ. ಹೊಸಹಳ್ಳಿ, ಟಾಟಾ ಎಸ್ಟೇಟ್, ಪೋಡಿಯ ಕಾಲೋನಿ, ಹಸಿರು ಕಾಡು ಎಸ್ಟೇಟ್ ಹಾಗೂ ವಿನಾಯಕ ಎಸ್ಟೇಟ್ ಸುತ್ತಮುತ್ತಲಿನ ಗ್ರಾಮಸ್ಥರು, ವಾಹನ ಸವಾರರು ಮತ್ತು ಕಾರ್ಮಿಕರು ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗಿ ಮನವಿ ಮಾಡಲಾಗಿದೆ.
ಕಾಡಾನೆಗಳು ಕಂಡುಬಂದಲ್ಲಿ ಸಾರ್ವಜನಿಕರು ಅವುಗಳ ಸಮೀಪ ಹೋಗದೆ, ತಕ್ಷಣವೇ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿಗೆ 7204004261 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ತಿಳಿಸಿದೆ.
ಪ್ರಕಟಣೆ ಸಮಯ: 30.08.2026, ಬೆಳಿಗ್ಗೆ 6.00 ಗಂಟೆ.
ಜಿ. ಹೊಸಹಳ್ಳಿ ಸುತ್ತಮುತ್ತ ಕಾಡಾನೆಗಳ ಸಂಚಾರ: ಸಾರ್ವಜನಿಕರಿಗೆ ಎಚ್ಚರಿಕೆ!
GNE UPDATES
ಇತ್ತೀಚಿನ ಸುದ್ದಿ