ಮೂಡಿಗೆರೆ, ಆಗಸ್ಟ್ 30: ಜಿ. ಹೊಸಹಳ್ಳಿ ಟಾಟಾ ಕಾಫಿ ಎಸ್ಟೇಟ್ ಪ್ರದೇಶದಲ್ಲಿ ಕಾಡಾನೆಗಳು ಕಂಡುಬಂದಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಜಿ. ಹೊಸಹಳ್ಳಿ ಟಾಟಾ ಕಾಫಿ ಎಸ್ಟೇಟ್, ಕೆಮ್ಮಣ್ಣುಗುಂಡಿ, ದಿಣ್ಣೆಕೆರೆ ಹಾಗೂ ಸಿಲ್ವರ್ ಖಾನ್ ಎಸ್ಟೇಟ್ ಸುತ್ತಮುತ್ತಲಿನ ಗ್ರಾಮಸ್ಥರು, ಕಾರ್ಮಿಕರು ಮತ್ತು ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

ಕಾಡಾನೆಗಳು ಕಂಡುಬಂದಲ್ಲಿ ಸಾರ್ವಜನಿಕರು ಅವುಗಳನ್ನು ಹಿಂಬಾಲಿಸದೆ ಅಥವಾ ಸಮೀಪಿಸಲು ಪ್ರಯತ್ನಿಸದೆ, ತಕ್ಷಣ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿಗೆ 7204004261 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ.

ಈ ಪ್ರಕಟಣೆಯನ್ನು 30.08.2026ರಂದು ಬೆಳಗ್ಗೆ 8.00 ಗಂಟೆಗೆ ಅರಣ್ಯ ಇಲಾಖೆ, ಮೂಡಿಗೆರೆ ವತಿಯಿಂದ ಹೊರಡಿಸಲಾಗಿದೆ.