ಮೂಡಿಗೆರೆ, ಆ.29: ಭುವನೇಶ್ವರಿ ಗುಂಪಿನ ಕಾಡಾನೆಗಳು ಮೂಡಿಗೆರೆ ತಾಲ್ಲೂಕಿನ ಟಿ.ಸಿ. ರುದ್ರೇಗೌಡರ ತೋಟದ ಕಾಡು ಪ್ರದೇಶ ಹಾಗೂ ಹೊಸಕೆರೆ ಎಸ್ಟೇಟ್ ಭಾಗದಲ್ಲಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಕಾಡಾನೆಗಳು ಹೊಸಪುರ, ಆನೆ ಮಲ್ಲಪ್ಪ ಗುಡ್ಡ, ಸಾಲುಮರ, ಜಿ. ಹೊಸಹಳ್ಳಿ, ಹಸಿರು ಕಾಡು ಎಸ್ಟೇಟ್ ಹಾಗೂ ವಿನಾಯಕ ಎಸ್ಟೇಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸುವ ಸಾಧ್ಯತೆ ಇರುವುದರಿಂದ, ಈ ಭಾಗದ ಗ್ರಾಮಸ್ಥರು, ಕಾರ್ಮಿಕರು ಹಾಗೂ ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ.

ಕಾಡಾನೆಗಳು ಕಂಡುಬಂದಲ್ಲಿ ಸಾರ್ವಜನಿಕರು ಅವುಗಳ ಸಮೀಪಕ್ಕೆ ತೆರಳದೆ, ತಕ್ಷಣವೇ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 7204004261ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಇಲಾಖೆ ತಿಳಿಸಿದೆ.

ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಿ, ಕಾಡಾನೆಗಳ ಸಂಚಾರ ಕಂಡುಬಂದಲ್ಲಿ ಅರಣ್ಯ ಇಲಾಖೆಗೆ ತಕ್ಷಣ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

ದಿನಾಂಕ: 29-08-2026
ಸಮಯ: ಸಂಜೆ 7:38.