ಮೂಡಿಗೆರೆ: ಭಾರತೀಯ ಬೌದ್ಧ ಮಹಾ ಸಭಾ ಮೂಡಿಗೆರೆ ತಾಲ್ಲೂಕು ಶಾಖೆ ಹಾಗೂ ಗೋಣಿಬೀಡು ಹೋಬಳಿ ಶಾಖೆಯ ವತಿಯಿಂದ ಪ್ರತಿ ತಿಂಗಳಂತೆ ಈ ತಿಂಗಳ ಚಾತುರ್ಮಾಸ ಹುಣ್ಣಿಮೆ ಕಾರ್ಯಕ್ರಮವನ್ನು ಆಗಸ್ಟ್ 28, ಶುಕ್ರವಾರ ಸಂಜೆ 7 ಗಂಟೆಗೆ ಅಣಜೂರಿನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಬೌದ್ಧ ಮಹಾ ಸಭಾ ಗೋಣಿಬೀಡು ಹೋಬಳಿ ಅಧ್ಯಕ್ಷರಾದ ಚಂದ್ರಶೇಖರ ಅಣಜೂರು ಅವರು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೈಸೂರಿನ ಬೌದ್ಧ ಉಪಾಸಕಿ ಜಯಲಕ್ಷ್ಮಿ ಅವರು ಬುದ್ಧ ವಂದನೆಗಳನ್ನು ನೆರವೇರಿಸಿ, ಭಗವಾನ್ ಬುದ್ಧರ ವಿಚಾರಧಾರೆ, ಮಾನವೀಯ ಮೌಲ್ಯಗಳು ಹಾಗೂ ಬುದ್ಧನ ಸಂದೇಶಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಾರತೀಯ ಬೌದ್ಧ ಮಹಾ ಸಭಾ ಮೂಡಿಗೆರೆ ತಾಲ್ಲೂಕು ಅಧ್ಯಕ್ಷರಾದ ಎಸ್.ಬಿ. ಹಾಲಯ್ಯ, ಉಪಾಧ್ಯಕ್ಷರಾದ ಬಿ.ಪಿ. ಮಂಜುನಾಥ, ಮಹೇಂದ್ರ ಮೌರ್ಯ, ಬಿ.ಎಂ. ಶಂಕರ್, ಜಗದೀಶ ಪಲ್ಗುಣಿ, ಪಿ.ಕೆ. ಮಂಜುನಾಥ, ಶ್ರೀಕಾಂತ್, ನಾಗೇಶ್, ಮಹೇಶ್, ಮಲ್ಲೇಶ್, ನಿಂಗರಾಜ್ ಹಂತೂರು, ರವಿ, ನವೀನ್ ಸೇರಿದಂತೆ ಬಿಎಸ್‌ಐ ಪದಾಧಿಕಾರಿಗಳು, ಅಣಜೂರು ಗ್ರಾಮದ ಮಹಿಳೆಯರು, ಮಕ್ಕಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಬುದ್ಧನ ವಿಚಾರಧಾರೆ ಹಾಗೂ ಸಮಾನತೆ, ಸಹೋದರತೆ ಮತ್ತು ಮಾನವೀಯತೆಯ ಸಂದೇಶಗಳನ್ನು ಜನರಿಗೆ ತಲುಪಿಸುವ ಕುರಿತು ಚರ್ಚಿಸಲಾಯಿತು.

ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಭಾರತೀಯ ಬೌದ್ಧ ಮಹಾ ಸಭಾದ ಎಲ್ಲಾ ಪದಾಧಿಕಾರಿಗಳು ಹಾಗೂ ಅಣಜೂರು ಗ್ರಾಮದ ಗ್ರಾಮಸ್ಥರಿಗೆ ಸಂಘಟನೆಯ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಲಾಯಿತು.