ಮೂಡಿಗೆರೆ, ಆಗಸ್ಟ್ 19: ಮೂಡಿಗೆರೆ ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ, ಮೂರು ಕಾಡಾನೆಗಳು ಕಾರ್ ಬೈಲು ಪ್ರದೇಶದಲ್ಲಿರುವ ಶಿವಾನಂದ್ ಅವರ ತೋಟ, ಮಂಜುನಾಥ್ ಗೌಡ್ರು ಅವರ ತೋಟ ಹಾಗೂ ವಿರೇಶ್ ಅವರ ತೋಟದ ಸುತ್ತಮುತ್ತ ಸಂಚರಿಸುತ್ತಿರುವುದು ಕಂಡು ಬಂದಿದೆ.

ಈ ಹಿನ್ನೆಲೆಯಲ್ಲಿ ಗಬ್ಬಳ್ಳಿ, ಪುರ, ಚಟ್ಟನಹಳ್ಳಿ, ಹುಲಿ ಹಂಡ್ಲು ಎಸ್ಟೇಟ್, ಕಲ್ಲುಗುಡ್ಡ, ಕಮ್ಮಾರಗೋಡು ಎಸ್ಟೇಟ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು, ಕಾರ್ಮಿಕರು ಹಾಗೂ ವಾಹನ ಸವಾರರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

ಕಾಡಾನೆಗಳ ಚಲನವಲನ ಇರುವ ಪ್ರದೇಶಗಳಿಗೆ ಅನಗತ್ಯವಾಗಿ ತೆರಳದಂತೆ ಹಾಗೂ ರಾತ್ರಿ ವೇಳೆ ವಿಶೇಷ ಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಕಾಡಾನೆಗಳು ಕಂಡುಬಂದಲ್ಲಿ ತಕ್ಷಣವೇ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 7204004261 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಕಟಣೆ ದಿನಾಂಕ: 19-08-2026
ಸಮಯ: ರಾತ್ರಿ 8.20 ಗಂಟೆ.