ಮೂಡಿಗೆರೆ, ಆಗಸ್ಟ್ 20: ಕಾರ್ ಬೈಲು ಪ್ರದೇಶದ ವಿರೇಶ್ ಗೌಡ ಅವರ ತೋಟದಲ್ಲಿ ಮೂರು ಕಾಡಾನೆಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು, ಕಾರ್ಮಿಕರು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಮೂಡಿಗೆರೆ ಮನವಿ ಮಾಡಿದೆ.
ಗಬ್ಬಳ್ಳಿ, ಪುರ, ಚಟ್ಟನಹಳ್ಳಿ, ಹುಲಿ ಹಂಡ್ಲು ಎಸ್ಟೇಟ್, ಕಲ್ಲುಗುಡ್ಡ ಹಾಗೂ ಕಮ್ಮಾರಗೋಡು ಎಸ್ಟೇಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಸಾರ್ವಜನಿಕರು ಕಾಡಾನೆಗಳ ಚಲನವಲನದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.
ಕಾಡಾನೆಗಳು ಕಂಡುಬಂದಲ್ಲಿ ಸಾರ್ವಜನಿಕರು ಅವುಗಳ ಸಮೀಪಕ್ಕೆ ತೆರಳದೆ, ತಕ್ಷಣ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ: 7204004261 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ತಿಳಿಸಿದೆ.
ದಿನಾಂಕ: 20-08-2026
ಸಮಯ: ಬೆಳಿಗ್ಗೆ 7:47.
ಮೂಡಿಗೆರೆ: ಮೂರು ಕಾಡಾನೆಗಳ ಸಂಚಾರ — ಸಾರ್ವಜನಿಕರಿಗೆ ಅರಣ್ಯ ಇಲಾಖೆ ಎಚ್ಚರಿಕೆ
GNE UPDATES
ಇತ್ತೀಚಿನ ಸುದ್ದಿ