ಮೂಡಿಗೆರೆ, ಆಗಸ್ಟ್ 21: ಕಸ್ಕೆಬೈಲ್ ಪ್ರದೇಶದ ಶಶಿಧರ್ ಗೌಡ್ರು ಅವರ ತೋಟ, ಪ್ರಕಾಶ್ ಗೌಡ್ರು ಅವರ ತೋಟ ಹಾಗೂ ತಿಮ್ಮೆಗೌಡ್ರು ಅವರ ತೋಟದ ಭಾಗದಲ್ಲಿ ಕಾಡಾನೆಗಳು ಸಂಚರಿಸುತ್ತಿರುವುದು ಕಂಡುಬಂದಿದೆ ಎಂದು ಮೂಡಿಗೆರೆ ಅರಣ್ಯ ಇಲಾಖೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಕಲ್ಲುಗುಡ್ಡ ಹಾಗೂ ಹುಲಿ ಹಂಡ್ಲು ಎಸ್ಟೇಟ್ ಸುತ್ತಮುತ್ತಲಿನ ಗ್ರಾಮಸ್ಥರು, ಕಾರ್ಮಿಕರು ಹಾಗೂ ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

ಕಾಡಾನೆಗಳು ಕಂಡುಬಂದಲ್ಲಿ ಸಾರ್ವಜನಿಕರು ಅವುಗಳ ಸಮೀಪಕ್ಕೆ ತೆರಳದೆ, ತಕ್ಷಣ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 7204004261ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ದಿನಾಂಕ: 21.08.2026 | ಸಮಯ: ಬೆಳಿಗ್ಗೆ 08:35.