ಮೂಡಿಗೆರೆ, ಆಗಸ್ಟ್ 21: ಮೂಡಿಗೆರೆ ಅರಣ್ಯ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.
ಕಾರ್ ಬೈಲು ಗ್ರಾಮದ ಅವಿನಾಶ್ ಅವರ ಶುಂಠಿ ಗದ್ದೆಯ ಕೆಳಭಾಗದಲ್ಲಿರುವ ತೋಟದಲ್ಲಿ ಮೂರು ಕಾಡಾನೆಗಳು ಕಂಡುಬಂದಿದ್ದು, ಸದ್ಯ ಆನೆಗಳು ಆ ಪ್ರದೇಶದಲ್ಲಿ ಸಂಚರಿಸುತ್ತಿವೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಕಾರ್ ಬೈಲು, ತುದಿಯಲ, ಬಾರದಹಳ್ಳಿ ಹಾಗೂ ಚಂದ್ರಪುರ ಗ್ರಾಮಗಳ ಸುತ್ತಮುತ್ತಲಿನ ಗ್ರಾಮಸ್ಥರು, ಕಾರ್ಮಿಕರು ಮತ್ತು ವಾಹನ ಸವಾರರು ಹೆಚ್ಚಿನ ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಕಾಡಾನೆಗಳು ಕಂಡುಬಂದಲ್ಲಿ ಸಾರ್ವಜನಿಕರು ಆನೆಗಳ ಸಮೀಪ ತೆರಳದೆ, ಅವುಗಳನ್ನು ಕೆಣಕದಂತೆ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ, ಕಾಡಾನೆಗಳ ಚಲನವಲನ ಕಂಡುಬಂದ ತಕ್ಷಣ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ: 7204004261 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ದಿನಾಂಕ: 21.08.2026
ಸಮಯ: ಬೆಳಿಗ್ಗೆ 07:20.
ಮೂಡಿಗೆರೆ : ಮೂರು ಕಾಡಾನೆಗಳ ಸಂಚಾರ: ಗ್ರಾಮಸ್ಥರು, ಕಾರ್ಮಿಕರು ಹಾಗೂ ವಾಹನ ಸವಾರರಿಗೆ ಎಚ್ಚರಿಕೆ!
GNE UPDATES
ಇತ್ತೀಚಿನ ಸುದ್ದಿ