ಮೂಡಿಗೆರೆ, ಆಗಸ್ಟ್ 25: ಮೂಡಿಗೆರೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಭುವನೇಶ್ವರಿ ಗುಂಪಿನ ಕಾಡಾನೆಗಳು ದೊಡ್ಡಗಳ್ಳ ಎಸ್ಟೇಟ್ ಕಡೆಯಿಂದ ಸಂಚರಿಸುತ್ತಿರುವುದು ಕಂಡುಬಂದಿದೆ ಎಂದು ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ಕಾಡಾನೆಗಳ ಸಂಚಾರ ಹಿನ್ನೆಲೆಯಲ್ಲಿ ಕಸ್ಕೆಬೈಲ್, ಕಲ್ಲುಗುಡ್ಡ, ಹೊಸಪುರ, ಆನೆ ಮಲ್ಲಪ್ಪ ಗುಡ್ಡ ಹಾಗೂ ಹುಲಿಹಂಡ್ಲು ಎಸ್ಟೇಟ್ ಸುತ್ತಮುತ್ತಲಿನ ಗ್ರಾಮಸ್ಥರು, ಕಾರ್ಮಿಕರು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಕಾಡಾನೆಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ: 7204004261.
ಕಾಡಾನೆಗಳ ಸಂಚಾರ: ಸಾರ್ವಜನಿಕರಿಗೆ ಅರಣ್ಯ ಇಲಾಖೆ ಎಚ್ಚರಿಕೆ!
GNE UPDATES
ಇತ್ತೀಚಿನ ಸುದ್ದಿ